Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಹಾಗೂ ತೊಟ್ಟೆತ್ತೋಡಿ ಶ್ರೀ ವಾಣಿ ವಿಲಾಸ ಅನುದಾನಿತ ಶಾಲೆ ಇದರ ಸಂಚಾಲಕಿ, ಪ್ರಗತಿಪರ ಕೃಷಿಕೆ ಶ್ರೀಮತಿ ಪ್ರೇಮಾ ಕೆ ಭಟ್ (80) ನಿಧನ.

ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಹಾಗೂ ತೊಟ್ಟೆತ್ತೋಡಿ ಶ್ರೀ ವಾಣಿ ವಿಲಾಸ ಅನುದಾನಿತ ಶಾಲೆ ಇದರ ಸಂಚಾಲಕಿ, ಪ್ರಗತಿಪರ ಕೃಷಿಕೆ ಶ್ರೀಮತಿ ಪ್ರೇಮಾ ಕೆ ಭಟ್ (80) ನಿಧನ.
ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಹಾಗೂ ಶ್ರೀ ವಾಣಿ ವಿಲಾಸ ಅನುದಾನಿತ ಶಾಲೆ ತೊಟ್ಟೆತ್ತೋಡಿ ಇದರ ಸಂಚಾಲಕಿ, ಪ್ರಗತಿಪರ ಕೃಷಿಕರಾಗಿದ್ದ, ಚಿಗುರುಪಾದೆ ಬಳಿಯ ತೊಟ್ಟೆತ್ತೋಡಿ ನಿವಾಸಿ ಶ್ರೀಮತಿ ಪ್ರೇಮಾ ಕೆ ಭಟ್ (80) ರವರು ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ನಿನ್ನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಮೀಯಪದವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಮಲರಾಯ ಬಂಟ ದೈವ ಕ್ಷೇತ್ರ ಬುಡ್ರಿಯ ಇದರ ಸೇವಾಟ್ರಸ್ಟ್ ನ ಅಧ್ಯಕ್ಷರಾಗಿದ್ದರು. ಮೃತರು ದಿ.ಕೇಶವ ಭಟ್ ರ ಧರ್ಮಪತ್ನಿಯಾಗಿದ್ದು, ಮಕ್ಕಳಾದ: ಕ.ಸಾ.ಪ ಕೇರಳ ಗಡಿನಾಡ ಘಟಕ ಅಧ್ಯಕ್ಷರಾದ ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಉಮಾಶಂಕರಿ, ಪ್ರಮೀಳ ಚುಳ್ಳಿಕ್ಕಾನ, ಕುಸುಮ, ಸೊಸೆ: ಶುಭ ಜೆ.ಪಿ, ಅಳಿಯಂದಿರಾದ: ಮಣಿಪಾಲದ ಪ್ರಸಿದ್ಧ ಜಿಯಾಲಜಿಸ್ಟ್ ಉದಯಶಂಕರ್, ಶ್ರೀ ಕೃಷ್ಣ ಚುಳ್ಳಿಕ್ಕಾನ, ಚಂದ್ರಶೇಖರ ಮೂಡುಬಿದಿರೆ, ಸಹೋದರರಾದ: ದ.ಕ ಖ್ಯಾತ ಕೃಷಿ ತಜ್ಞ ಬದನಾಜೆ ಶಂಕರ ಭಟ್ ಹಾಗೂ ಮಂಗಳೂರಿನ ಮಂಗಳಾ ನರ್ಸಿಂಗ್ ಹೋಂ ನ ವೈದ್ಯರಾದ ಡಾ.ಗಣಪತಿ ಭಟ್ ಮೊದಲಾದವರನ್ನು ಅಗಲಿದ್ದಾರೆ. ಮೃತರ ಮನೆಗೆ ಕ.ಸಾ.ಪ ಕೇಂದ್ರೀಯ ಅಧ್ಯಕ್ಷರಾದ ಮಹೇಶ್ ಜೋಷಿ ಸಹಿತ ಹಲವಾರು ‌ಗಣ್ಯರು ಆಗಮಿಸಿ ಅಂತಿಮ ದರ್ಶನಗೈದರು. ಮೃತರ ಅಂತ್ಯಕ್ರಿಯೆಯು ಇಂದು ಅಪರಾಹ್ನ 1.00 ಗಂಟೆಗೆ ಮನೆ ಪರಿಸರದಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.