Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸೆಪ್ಟೆಂಬರ್ 2 ರಂದು ಎಣ್ಮಕಜೆ ಪಂಚಾಯತ್ ನ ಸಾಯ 1 ನೇ ವಾರ್ಡ್ ನಲ್ಲಿ "ಎಡರಂಗ ಪಕ್ಷ ಬಿಟ್ಟು ಕಾಂಗ್ರೆಸ್ ಸೇರ್ಪಡೆ" ಎಂಬ ವರದಿ ಸತ್ಯಕ್ಕೆ ದೂರವಾದದ್ದು, - ಸಿಪಿಎಂ.

ಸೆಪ್ಟೆಂಬರ್ 2 ರಂದು ಎಣ್ಮಕಜೆ ಪಂಚಾಯತ್ ನ ಸಾಯ 1 ನೇ ವಾರ್ಡ್ ನಲ್ಲಿ "ಎಡರಂಗ ಪಕ್ಷ ಬಿಟ್ಟು ಕಾಂಗ್ರೆಸ್ ಸೇರ್ಪಡೆ" ಎಂಬ ವರದಿ ಸತ್ಯಕ್ಕೆ ದೂರವಾದದ್ದು, - ಸಿಪಿಎಂ.
ಪೆರ್ಲ: ಸುಮಾರು 20 ವರ್ಷಗಳಿಂದ ಸಾಯ 1 ನೇ ವಾರ್ಡ್ ನಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್, ಎಣ್ಮಕಜೆ ಪಂಚಾಯತ್, ಬ್ಲಾಕ್ ಪಂಚಾಯತ್, MLA, MP ಹೀಗೆ ಎಲ್ಲದರಲ್ಲೂ ಆಡಳಿತದಲ್ಲಿದೆ. ಕಾಂಗ್ರೆಸ್ ಎಣ್ಮಕಜೆ 1 ನೇ ವಾರ್ಡ್ ಸಾಯ, ಬಾಕಿಲಪದವಿನಲ್ಲಿ ಏನು ಅಭಿವೃದ್ಧಿ ನಡೆಸದೇ , ನಡೆದುಕೊಂಡು ಹೋಗಲು ಸಾಧ್ಯವಾಗದೆ ಇರುವ ರೋಡ್ ಅವಸ್ಥೆ, ಮುರಿದು ಬಿದ್ದ ಸಾಯ ಅಂಗನವಾಡಿ ಇದ್ದರೂ ಇದರ ಅಭಿವೃದ್ಧಿ ಇದುವರೆಗೆ ಮರೀಚಿಕೆಯಾಗಿ ಉಳಿದಿದೆ. ಅಲ್ಲದೆ ಕೇರಳ ಸರಕಾರ ಬಾಕಿಲಪದವು ಸೇತುವೆಗೆ 8.50 ಕೋಟಿ ಹಣ ಮಂಜೂರುಗೊಳಿಸಿದರೂ, ಅದನ್ನು ನಡೆಸದ ಹಾಗೆ ಪಂಚಾಯತ್ ಆಡಳಿತ ಸಮಿತಿ, MLA, MP ತಡೆ ಒಡ್ದುತ್ತಿದೆ. ಈಗಿರುವಾಗ ಕಾಂಗ್ರೆಸ್ ಜನರಿಂದ ದೂರವಾಗುತ್ತಿರುವ ಈ ಸಂದರ್ಭದಲ್ಲಿ ಕೆಲ ಜನರನ್ನು ರೋಡ್ ಅಭಿವೃದ್ಧಿ ಅನ್ನುವ ವಿಚಾರವನ್ನು ಮುಂದಿಟ್ಟು ಕರೆಸಿ ಶಾಲು ಹಾಕಿದ ಪಂಚಾಯತ್ ಅಧ್ಯಕ್ಷರ ನಡೆ ಖಂಡನೀಯ ಮತ್ತು ಹಾಸ್ಯಸ್ಪದ ಎಂದು ಸಿಪಿಎಂ ಆರೋಪಿಸಿದೆ. ಮೊನ್ನೆ ಸಾಯದಲ್ಲಿ ಕಾಂಗ್ರೆಸ್ ಗೆ ಸೇರಿದವರು ಸಿಪಿಐ.ಎಂ ಪಕ್ಷದ ಕಾರ್ಯಕರ್ತರಾಗಲಿ, ಸದಸ್ಯರಾಗಲಿ ಅಲ್ಲ ಮತ್ತು ಇವರಿಗೆ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸಿಪಿಐ.ಎಂ ಸಾಯ ಬ್ರಾಂಚ್ ಕಾರ್ಯದರ್ಶಿ ಸೂರಜ್ ಪ್ರಕಟಣೆ ಮೂಲಕ ಸೃಷ್ಟಿಕರಣ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.